ಚಂದ್ರಾಣಿ ಮುರ್ಮು ಒಬ್ಬ ಭಾರತೀಯ ರಾಜಕಾರಣಿ. ೨೦೧೯ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಒಡಿಶಾದ ಕಿಯೊಂಜಾರ್‌ನಿಂದ, ಬಿಜು ಜನತಾದಳದ ಸದಸ್ಯರಾಗಿ ಲೋಕಸಭೆಗೆ ಆಯ್ಕೆಯಾದರು. ಚಂದ್ರಾಣಿ ಮುರ್ಮು ಪ್ರಸ್ತುತ ಭಾರತದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ. = ಆರಂಭಿಕ ಜೀವನ = ಚಂದ್ರಾಣಿ ಮುರ್ಮು ಅವರು ಜೂನ್ ೧೬, ೧೯೯೩ ರಂದು ಜನಿಸಿದರು. ಮುರ್ಮು ೨೦೧೭ರಲ್ಲಿ ಭುವನೇಶ್ವರದ ಶಿಕ್ಷಾ ಅನುಸಂಧನ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರೈಸಿದರು. ಕಿಯೋಂಜಾರ್ ಕ್ಷೇತ್ರವು ಬುಡಕಟ್ಟು ಕ್ಷೇತ್ರವಾಗಿರುವುದರಿಂದ, ಬಿಜೆಡಿಯು ಇಲ್ಲಿಂದ ಸ್ಪರ್ಧಿಸಲು ವಿದ್ಯಾವಂತ ಮಹಿಳೆಯನ್ನು ಹುಡುಕುತ್ತಿತ್ತು. = ರಾಜಕೀಯ ಜೀವನ = ಚಂದ್ರಾಣಿ ಮುರ್ಮು ಅವರು ೧೭ನೇ ಲೊಕಸಭೆಯಲ್ಲಿ ಗೆಲುವು ಸಾಧಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು. = ಉಲ್ಲೇಖ =